Santanaagiru Nee Nilli (ಸಂತನಾಗಿರು ನೀ ನಿಲ್ಲಿ)
"ಸಂತನಾಗಿರು ನೀನಿಲ್ಲಿ" — Concept & Genesis
Pranamam.
I love Amma Jaganmathe. I don't just worship Her; I feel Her presence right beside me in every moment, holding my breath, guiding my thoughts. I truly, deeply believe She is here for me.
For a long time, my path was filled with outer rituals and formal sadhana. But at one point, Amma Jaganmathe stopped me. It was as if She took the ritual items from my hands and said, "No more outer rituals. Look inside." She forced me to sit quietly, to stop accepting things just because someone said so, and to dig deep until I unearthed the raw truth about Her, about life, and about myself.
Sitting alone in that silence, one big question started burning in my chest: In this noisy, chaotic world, how should a human being actually live?
That is how this song was born. Here is the raw truth behind the lines Amma gave me:
The Hook: Standing Ground in the Chaos
"ಸಂತನಾಗಿರು ನೀ ನಿಲ್ಲಿ, ಜಗದ ಜಾತ್ರೆಯಲ್ಲಿ... ಶಾಂತವಾಗಿರು ನೀ ನಿಲ್ಲಿ, ಗೊಂದಲದ ಗೂಡಿನಲ್ಲಿ..."
Amma never asked me to run away from the world or escape into isolation. She showed me that the real test is staying right here, in the middle of this noisy, chaotic market (ಜಗದ ಜಾತ್ರೆ). The world will always be a messy nest of confusion (ಗೊಂದಲದ ಗೂಡು). You don't find peace by trying to fix or silence the outer world—you become a saint (ಸಂತ) right where you stand by keeping your inner quiet untouched.
Verse 1: Unmasking Worldly Relationships
"ಯಾರೂ ನಿನ್ನವರಲ್ಲ, ಎಲ್ಲರೂ ಪ್ರಾಯಾಣಿಕರೇ... ನಂಬಿಕೆ ಇಡಬೇಡ ಇಲ್ಲಿ, ಎಲ್ಲರೂ ವ್ಯಾಪಾರಿಗಳೇ..."
When you look closely without emotional illusion, no one stays forever. Everyone you meet is just a fellow traveler sharing a short distance on the same road. On a worldly level, most relationships run on transactions—giving only to get something back (ವ್ಯಾಪಾರಿಗಳೇ). Amma taught me not to lean on worldly expectations, because expecting from people only leads to heartbreak.
Verse 2: The Lotus and the Floating Cloud
"ಕೆಸರಿನಲ್ಲಿದ್ದರೂ ಅಂಟದ ತಾವರೆಯಂತೆ, ಬದುಕಿ ತೋರಿಸು ನೀನು ಕಳಂಕವಿಲ್ಲದಂತೆ... ಬರುವವರು ಬರಲಿ, ಹೋಗುವವರು ಹೋಗಲಿ, ನಿಲ್ಲದ ಮೋಡದ ಹಾಗೆ ನೀ ತೇಲುತಲಿರು ಬಾನಿನಲ್ಲಿ..."
"ಆಸೆಗಳ ಸಂತೆ ಇದು, ಮೋಸದ ಅಂಗಡಿ ಇದು, ಕೊಳ್ಳಲು ಹೋಗಬೇಡ, ನೆಮ್ಮದಿ ಸಿಗದು ಅಲ್ಲಿ..."
A lotus doesn't hate the mud it grows in; it just refuses to let the mud stick to its petals. That is how Amma wants us to live. People will walk into your life and walk out—let them come and go. Float like an unanchored cloud in the vast sky without clinging. This entire world is a market selling endless desires (ಆಸೆಗಳ ಸಂತೆ) and deceptive promises (ಮೋಸದ ಅಂಗಡಿ). If you go looking to buy peace here, you will come back empty-handed. True peace cannot be bought; it is discovered inside.
Verse 3: Rising Above Dualities and Illusions
"ಹೊಗಳಿಕೆಗೆ ಉಬ್ಬಬೇಡ, ತೆಗಳಿಕೆಗೆ ಕುಗ್ಗಬೇಡ, ಮಾನಾಪಮಾನಗಳೆಲ್ಲ ಗಾಳಿಯಲ್ಲಿ ತೂರಿಬಿಡು... ಬಣ್ಣದ ವೇಷಕ್ಕೆ ಬೆರಗಾಗಿ ಹೋಗಬೇಡ, ಮಾತಿನ ಮೋಡಿಗೆ ಮರುಳಾಗಿ ಬೀಳಬೇಡ..."
"ಇದ್ದದ್ದು ಇರೋ ಹಂಗೆ ಕಾಣುವುದು ಸತ್ಯವೊಂದೇ, ಉಳಿದೆಲ್ಲ ಕಣ್ಣ ಮುಂದೆ ಕರಗುವ ಮಾಯೆಯೊಂದೇ... ಸಾಕ್ಷಿಯಾಗಿರು ನೀನು ಈ ನಾಟಕದ ಅಂತ್ಯಕ್ಕೆ, ಪಾತ್ರ ಮುಗಿದ ಮೇಲೆ ಸೇರುವೆ ನೀ ಏಕಾಂತಕ್ಕೆ..."
People praise you today and criticize you tomorrow. Both are empty noise in the air. Amma showed me to toss both honor and dishonor into the wind and walk light. Don't be fooled by shiny disguises or sweet, manipulative words. This life is just a grand stage play. Play your assigned role honestly, but stay internally as a detached witness (ಸಾಕ್ಷಿ). When your role ends, you simply return to the quiet solitude (ಏಕಾಂತ) of Amma.
Verse 4: The Ultimate Inner Shift
"ಜಗತ್ತು ಬದಲಾಗಲ್ಲ, ನೀನು ಬದಲಾಗು... ಕತ್ತಲದ ನಡುವೆ ಒಂದು ಮುಷ್ಠಿ ಮೌನವಾಗು... ಸಂತನಾಗಿರು, ಕೇವಲ ಸಾಕ್ಷಿಯಾಗಿರು... ಶಾಂತ... ಶಾಂತ... ಶಾಂತ..."
Stop wasting energy trying to change or fix this world (ಜಗತ್ತು ಬದಲಾಗಲ್ಲ). Change yourself (ನೀನು ಬದಲಾಗು). When there is darkness, noise, and confusion everywhere, don't add more noise to it. Just become a small fistful of pure, deep silence (ಒಂದು ಮುಷ್ಠಿ ಮೌನ). Stand as a silent observer. Just be peaceful. Just be still.
— Athmanveshi

#🎵 Complete Lyrics (ಸಂಪೂರ್ಣ ಸಾಹಿತ್ಯ)
ಸಂತನಾಗಿರು ನೀ ನಿಲ್ಲಿ, ಜಗದ ಜಾತ್ರೆಯಲ್ಲಿ
ಶಾಂತವಾಗಿರು ನೀ ನಿಲ್ಲಿ, ಗೊಂದಲದ ಗೂಡಿನಲ್ಲಿ
ಯಾರೂ ನಿನ್ನವರಲ್ಲ, ಎಲ್ಲರೂ ಪ್ರಾಯಾಣಿಕರೇ
ನಂಬಿಕೆ ಇಡಬೇಡ ಇಲ್ಲಿ, ಎಲ್ಲರೂ ವ್ಯಾಪಾರಿಗಳೇ
ಸಂತನಾಗಿರು ನೀ ನಿಲ್ಲಿ, ಜಗದ ಜಾತ್ರೆಯಲ್ಲಿ...
ಕೆಸರಿನಲ್ಲಿದ್ದರೂ ಅಂಟದ ತಾವರೆಯಂತೆ
ಬದುಕಿ ತೋರಿಸು ನೀನು ಕಳಂಕವಿಲ್ಲದಂತೆ
ಬರುವವರು ಬರಲಿ, ಹೋಗುವವರು ಹೋಗಲಿ
ನಿಲ್ಲದ ಮೋಡದ ಹಾಗೆ ನೀ ತೇಲುತಲಿರು ಬಾನಿನಲ್ಲಿ
ಆಸೆಗಳ ಸಂತೆ ಇದು, ಮೋಸದ ಅಂಗಡಿ ಇದು
ಕೊಳ್ಳಲು ಹೋಗಬೇಡ, ನೆಮ್ಮದಿ ಸಿಗದು ಅಲ್ಲಿ
ಸಂತನಾಗಿರು ನೀ ನಿಲ್ಲಿ, ಜಗದ ಜಾತ್ರೆಯಲ್ಲಿ
ಶಾಂತವಾಗಿರು ನೀ ನಿಲ್ಲಿ, ಗೊಂದಲದ ಗೂಡಿನಲ್ಲಿ...
ಹೊಗಳಿಕೆಗೆ ಉಬ್ಬಬೇಡ, ತೆಗಳಿಕೆಗೆ ಕುಗ್ಗಬೇಡ
ಮಾನಾಪಮಾನಗಳೆಲ್ಲ ಗಾಳಿಯಲ್ಲಿ ತೂರಿಬಿಡು
ಬಣ್ಣದ ವೇಷಕ್ಕೆ ಬೆರಗಾಗಿ ಹೋಗಬೇಡ
ಮಾತಿನ ಮೋಡಿಗೆ ಮರುಳಾಗಿ ಬೀಳಬೇಡ
ಇದ್ದದ್ದು ಇರೋ ಹಂಗೆ ಕಾಣುವುದು ಸತ್ಯವೊಂದೇ
ಉಳಿದೆಲ್ಲ ಕಣ್ಣ ಮುಂದೆ ಕರಗುವ ಮಾಯೆಯೊಂದೇ
ಸಾಕ್ಷಿಯಾಗಿರು ನೀನು ಈ ನಾಟಕದ ಅಂತ್ಯಕ್ಕೆ
ಪಾತ್ರ ಮುಗಿದ ಮೇಲೆ ಸೇರುವೆ ನೀ ಏಕಾಂತಕ್ಕೆ
ಸಂತನಾಗಿರು ನೀ ನಿಲ್ಲಿ, ಜಗದ ಜಾತ್ರೆಯಲ್ಲಿ
ಶಾಂತವಾಗಿರು ನೀ ನಿಲ್ಲಿ, ಗೊಂದಲದ ಗೂಡಿನಲ್ಲಿ...
ಜಗತ್ತು ಬದಲಾಗಲ್ಲ, ನೀನು ಬದಲಾಗು
ಕತ್ತಲದ ನಡುವೆ ಒಂದು ಮುಷ್ಠಿ ಮೌನವಾಗು
ಸಂತನಾಗಿರು, ಕೇವಲ ಸಾಕ್ಷಿಯಾಗಿರು
ಶಾಂತ... ಶಾಂತ... ಶಾಂತ...
Athmanveshi Originals
Seeking the Soul through Sound & Sahitya.
© 2026 Athmanveshi Originals. All Rights Reserved.
Crafted with soul in Karnataka, India.
Athmanveshi.theinnerpilgrim@gmail.com
